ಏಪ್ರಿಲ್ 2020 ಹಾಗೂ ಮೇ 2020 ಕಾರ್ಯಕ್ರಮಗಳು


ಏಪ್ರಿಲ್ 2020ರ ರೈತರಿಗೆ ಸಲಹೆ

ಏಪ್ರಿಲ್ 2020ರ ಮಾಹೆಯಲ್ಲಿ ಕೋವಿಡ್ 19ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಫೋನ್ ಮುಖಾಂತ್ರ ಹಾಗೂ ಕೆವಿಕೆಗೆ ಬರುವ ರೈತರಿಗೆ ಸಲಹೆಯನ್ನು ನೀಡಲಾಯಿತು. ಇದರ ಜೊತೆಗೆ ನರ್ಸರಿ, ಜೈವಿಕ ಉತ್ಪನ್ನಗಳು ಹಾಗೂ ಔಷಧಿಗಳನ್ನು ಬೇಡಿಕೆಅನುಸಾರವಾಗಿ ಒದಗಿಸಲಾಯಿತು.


ಮೇ 2020ರ ರೈತರಿಗೆ ಸಲಹೆ

ಮೇ 2020ರ ಮಾಹೆಯಲ್ಲಿ ಕೋವಿಡ್ 19ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಫೋನ್ ಮುಖಾಂತ್ರ ಹಾಗೂ ಕೆವಿಕೆಗೆ ಬರುವ ರೈತರಿಗೆ ಸಲಹೆಯನ್ನು ನೀಡಲಾಯಿತು. ಇದರ ಜೊತೆಗೆ ನರ್ಸರಿ, ಜೈವಿಕ ಉತ್ಪನ್ನಗಳು ಹಾಗೂ ಔಷಧಿಗಳನ್ನು ಬೇಡಿಕೆಅನುಸಾರವಾಗಿ ಒದಗಿಸಲಾಯಿತು.


ಪತ್ರಿಕಾ ವರದಿ

ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ವಿಜ್ಞಾನಿಗಳು ರೈತರ ತಾಕಿಗೆ ಭೇಟಿ ನೀಡಿ ಸಲಹೆ ನೀಡಿ ಮಾರುಕಟ್ಟೆ ಸಂಪರ್ಕವನ್ನು ಮಾಡಿಕೊಡಲಾಯಿತು.


ಸಭೆಗಳಲ್ಲಿ ಭಾಗವಹಿಸಿರುವುದು
 • ದಿನಾಂಕ 13.04.2020 ರಂದು ಐಸಿಎಆರ್ ಅಟಾರಿ, ಬೆಂಗಳೂರು ರವರೊಂದಿಗೆ ಕೋವಿಡ್ 19ರ ಕೆವಿಕೆಯ ಕ್ರಮಗಳ ಕುರಿತ ವೀಡಿಯೋ ಸಂವಾದ
 • ವಿಸಿಫಾರಂ, ಮಂಡ್ಯದಲ್ಲಿ ದಿನಾಂಕ 24.04.2020 ರಂದು ಕೆವಿಕೆಯ ಕ್ರಿಯಾ ಯೋಜನೆ 2020ರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಸ್ತರಣೆ ನಿರ್ದೇಶಕರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
 • ದಿನಾಂಕ 06.05.2020 ರಂದು ಮಂಡ್ಯಾದ ವಿ.ಸಿ. ಫಾರಂನ ಸಹ ಪ್ರಾಧ್ಯಾಪಕರೊಂದಿಗೆ ವಲಯ 6 ಜೆಡ್.ಆರ್.ಇ.ಪಿ ವೀಡಿಯೋ ಸಂವಾದಲ್ಲಿ ಸಭೆಯಲ್ಲಿ ಭಾಗವಹಿಸಲಾಯಿತು.
 • ದಿನಾಂಕ 07.05.2020 ರಂದು ಮೈಸೂರಿನ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಯವರು ನಡೆಸಿಕೊಟ್ಟ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
 • ದಿನಾಂಕ 08.05.2020 ರಂದು ಐಸಿಎಆರ್ ಅಟಾರಿ, ಬೆಂಗಳೂರು ರವರು ನಡೆಸಿದ ವೀಡಿಯೋ ಸಂವಾದದಲ್ಲಿ ಕೋವಿಡ್ 19ರ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
 • ದಿನಾಂಕ 15.05.2020 ರಂದು ವೀಡಿಯೋ ಸಂವಾದಲ್ಲಿ ಪೂರ್ವಭಾವಿ 2019ರ ವಾರ್ಷಿಕ ವರದಿ ಮಂಡನೆಯ ಹಾಗೂ ಕ್ರಿಯಾ ಯೋಜನೆ 2020-21ರ ಸಭೆಯಲ್ಲಿ ಭಾಗವಹಿಸಲಾಯಿತು.
 • ದಿನಾಂಕ 26.05.2020 ರಂದು ಯೋಜನೆಯ ಪ್ರಸ್ತಾವನೆ ಕುರಿತು ಐಸಿಆರ್ ಅಟಾರಿ, ಬೆಂಗಳೂರು ರವರು ನಡೆಸಿದ ವೀಡಿಯೋ ಸಂವಾದದಲ್ಲಿ ಭಾಗವಹಿಸಲಾಯಿತು.
 • ಬೆಂಗಳೂರಿನ ಜಿಕೆವಿಕೆಯಲ್ಲಿ ಜರುಗಿದ ಕ್ರಿಯಾಯೋಜನೆ 2020-21 ಹಾಗೂ ವಾರ್ಷಿಕ ವರದಿ 2019ರ ಮಂಡನೆ ಸಭೆಯಲ್ಲಿ ಭಾಗಹಿಸಿ, ಜೆಎಸ್ಎಸ್ ಕೆವಿಕೆಯ ವರದಿ ಮಂಡನೆಯನ್ನು ಮಂಡಿಸಲಾಯಿತು.

 • ಸೈನಿಟೈಸರ್ ತಯಾರಿಕೆ

  ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಕೆವಿಕೆಯ ವತಿಯಿಂದ ಶ್ರೀಮತಿ ನೇತ್ರಾವತಿ ಎತ್ತಿನಮನಿ, ವಿಜ್ಞಾನಿ (ಗೃಹ ವಿಜ್ಞಾನ) ಹಾಗು ಶ್ರೀ ಜೆ.ಜಿ. ರಾಜಣ್ಣ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರವರು ಹಾಂಡ್ ಸಾನಿಟೈಸರ್ ಹಾಗೂ ಸ್ವಸಹಾಯ ಸಂಘದವರಿಂದ ಮಾಸ್ಕ್ ತಯಾರಿಸಿ ಸಿಬ್ಬಂದಿವರ್ಗದವರಿಗೆ, ಜೆಎಸ್ಎಸ್ ಅಂಗಸಂಸ್ಥೆಗಳಿಗೆ ಹಾಗೂ ರೈತರಿಗೆ ನೀಡಲಾಯಿತು.


  ಕೆವಿಕೆಯ ಫಾರಂ ಚಟುವಿಕೆಗಳು

  ಬೆಳಗುಂದ ಫಾರಂನಲ್ಲಿ ಮಾವು ಹಾಗೂ ಸಪೋಟ ತೋಟದ ನಡುವೆ ಅಲಸಂದೆಯನ್ನು ಬಿತ್ತಲಾಯಿತು.

  ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಜೆಎಸ್ಎಸ್ ಕೆವಿಕೆ, ಸುತ್ತೂರು, ಮೈಸೂರು ಜಿಲ್ಲೆ                     ಭೇಟಿ ನೀಡಿದವರ ಸಂಖ‍್ಯೆ :