ಜೂನ್ 2020 and ಜುಲೈ 2020 Programme


ವಿಶ್ವ ಪರಿಸರ ದಿನಾಚರಣೆ

ದಿನಾಂಕ 05.06.2020 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯತು. ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕರಾದ ಶ್ರೀ ಎನ್. ಎಂ. ಶಿವಶಂಕರಪ್ಪನವರು ಹಾಗೂ ರೈತರು ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಆಗಮಿಸಿದ್ದ ರೈತರಿಗೆ ಕರಿಬೇವು ಹಾಗೂ ನುಗ್ಗೆ ಗಿಡವನ್ನು ಉಚಿತವಾಗಿ ನೀಡಲಾಯಿತು. 25 ರೈತರು ದಿನಾಚರಣೆಯಲ್ಲಿ ಭಾಗಹಿಸಿದ್ದರು.


ಪತ್ರಿಕೆಯಲ್ಲಿ ವರದಿ

ದಿನಾಂಕ 06.06.2020 ರಂದು ಆಚರಿಸಲಾದ ವಿಶ್ವ ಪರಿಸರ ದಿನಾರಣೆಯ ಪತ್ರಿಕಾ ವರದಿಯು ಕನ್ನಡ ಪ್ರಭ ಹಾಗೂ ಮೈಸೂರು ಮಿತ್ರ ಬಂದಿರುತ್ತದೆ.


ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ರವರೊಂದಿಗೆ ವಿಡಿಯೋ ಸಂವಾದ

ಶ್ರೀ ಬಿ.ಸಿ. ಪಾಟೀಲ್, ಮಾನ್ಯ ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ರವರೊಂದಿಗೆ ಐಸಿಎಆರ್-ಅಟಾರಿ, ಬೆಂಗಳೂರು ರವರು ಕರ್ನಾಟಕದ ಎಲ್ಲಾ ಕೆವಿಕೆಯೊಂದಿಗೆ ವಿಡಿಯೋ ಸಂವಾದವನ್ನು ಏರ್ಪಡಿಸಿದ್ದರು. ಸಂವಾದಲ್ಲಿ ನಮ್ಮ ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಭಾಗವಹಿಸಿದ್ದರು.


ಉದ್ದು ಬೆಳೆಯಲ್ಲಿ ಕ್ಷೇತ್ರೋತ್ಸವ

ಟಿ.ನರಸೀಪುರ ತಾಲ್ಲೂಕಿನ ನೀಲಸೋಗೆ ಗ್ರಾಮದಲ್ಲಿ ಉದ್ದು ಬೆಳೆ ಕ್ಷೇತ್ರೋತ್ಸವವನ್ನು ಸೀಡ್ ಹಬ್ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಲಾಗಿತ್ತು. ಮೈಸೂರಿನ ನಾಗನಹಳ್ಳಿಯ ಕೃಷಿ ವಿಸ್ತರಣೆಯ ನಿರ್ದೇಶಕರಾದ ಡಾ. ಎಂ. ಬೈರೇಗೌಡರವರು ಭಾಗವಹಿಸಿದ್ದರು. ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ 48 ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.


ಕೆವಿಕೆಯ ವರದಿ

ಉದ್ದು ಬೆಳೆ ಕ್ಷೇತ್ರೋತ್ಸವದ ಪತ್ರಿಕಾ ವರದಿಯು ಆಂದೋಲನ, ವಾರ್ತಾಭಾರತಿ, ವಿಶ್ವವಾಣಿ, ಕನ್ನಡ ಪತ್ರಿಕೆ ಹಾಗೂ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮೈಸೂರು ಅವೃತ್ತಿಯಲ್ಲಿ ಬಂದಿರುತ್ತದೆ.


ನವಣೆಯಾಧಾರಿತ ಮೌಲ್ಯವರ್ಧನೆ ತರಬೇತಿ

ನವಣೆಯಾಧಾರಿತ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆಯನ್ನು ಕೆ.ಆರ್. ನಗರದ ಅರಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. 57 ರೈತ ಹಾಗೂ ರೈತ ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಕೋವಿಡ್ 19ರ ಸಾಂಕ್ರಾಮಿಕ ರೋಗದ ಕುರಿತು ಮಾಹಿತಿಯನ್ನು ನೀಡಿ ಮಾಸ್ಕ್ ನೀಡಲಾಯಿತು.


ಭತ್ತದ ಬೀಜೋತ್ಪಾದನೆ ತಾಂತ್ರಿಕತೆಗೆಳು ಕಾರ್ಯಾಗಾರ

ಸುತ್ತೂರಿನ ಜೆಎಸ್ಎಸ್ ಕೆವಿಕೆಯಲ್ಲಿ ಭತ್ತ ಬೀಜೋತ್ಪಾದನಾ ತಾಂತ್ರಿಕತೆಗಳ ಕುರಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಮಂಡ್ಯಾದ ವಿ.ಸಿ.ಫಾರಂನ ಪ್ರಾಧ್ಯಾಪಕರಾದ ಡಾ. ಎನ್. ಶಿವಕುಮಾರ್ ರವರು ಮಾತನಾಡಿ ಹೆಚ್ಚು ಇಳುವರಿ ನೀಡುವ ತಳಿಗಳು ಸಂಕರಣ ತಳಿಗಳ ಪರಿಚಯವನ್ನು ರೈತರಿ ಮಾಡಿಸಿದರು. ಕೃಷಿ ಉದ್ಯಮದ ಕುರಿತು ಡಾ. ಅರುಣ್ ಬಳಮಟ್ಟಿಯವರು ಮಾತನಾಡಿದರು. 25 ರೈತ ಹಾಗೂ ರೈತ ಮಹಿಳೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


ಪತ್ರಿಕಾ ವರದಿ

ಸುತ್ತೂರಿನ ಜೆಎಸ್ಎಸ್ ಕೆವಿಕೆಯಲ್ಲಿ ಭತ್ತ ಬೀಜೋತ್ಪಾದನಾ ತಾಂತ್ರಿಕತೆಗಳ ಕುರಿತ ಕಾರ್ಯಾಗಾರದ ವರದಿಯು ಆಂದೋಲನ ಹಾಗೂ ವಿಜಯವಾಣಿಯಲ್ಲಿ ವರದಿಯಾಗಿದೆ.

ಭತ್ತದಲ್ಲಿ ನೇರ ಬಿತ್ತನೆ ಯಾಂತ್ರಿಕತೆ ಕುರಿತು ತರಬೇತಿ

ಹೆಚ್.ಡಿ. ಕೋಟೆಯ ನಿಲುವಾಗಿಲು ಗ್ರಾಮದಲ್ಲಿ ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ, ಸಮಗ್ರ ಪೀಡೆ ಹಾಗೂ ರೋಗ ನಿರ್ವಹಣೆ ಹಾಗೂ ನೇರ ಬಿತ್ತನೆ ಕುರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. 27 ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.

ಎಸ್.ಸಿ.ಎಸ್.ಪಿ ಯೋಜನಾ ತರಬೇತಿ ಕಾರ್ಯಕ್ರಮ

ಹೈದರಾಬಾದಿನ ಐ.ಐ.ಆರ್.ಆರ್. ಯೋಜನೆಯಾದ ಭತ್ತಲದಲ್ಲಿ ಎಸ್.ಸಿ.ಎಸ್.ಪಿ ಯೋಜನಾ ತರಬೇತಿ ಕಾರ್ಯಕ್ರಮವನ್ನು ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ತರಬೇತಿ ಕಾರ್ಯಕ್ರಮದಲ್ಲಿ ಭತ್ತದ ಬೇಸಾಯದಲ್ಲಿ ಸಮಗ್ರ ಬೆಳೆ ನಿರ್ವಹಣೆ, ಸಮಗ್ರ ಪೀಡೆ ಹಾಗೂ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಜೆಎಸ್ಎಸ್ ಕೆವಿಕೆ, ಸುತ್ತೂರು, ಮೈಸೂರು ಜಿಲ್ಲೆ                     ಭೇಟಿ ನೀಡಿದವರ ಸಂಖ‍್ಯೆ :