ಕೋವಿಡ್ 19ರ ಉಪಕ್ರಮಗಳು


ಕೋವಿಡ್ 19 ಸಾಂಕ್ರಾಮಿಕ ರೋಗವು ನಮ್ಮ ಜೀವನದ ಕ್ರಮವನ್ನು ಬದಲು ಮಾಡಿದೆ. ಕೋವಿಡ್19ರ ಪರಿಣಾಮ ಎಲ್ಲಾ ರಂಗಗಳಲ್ಲೂ ಬೆದರಿಕೆಯೊಡ್ಡಿದೆ. ಕೃಷಿ ವಲಯವೂ ಸಹ ಕೋವಿಡ್ 19ರ ಹೊಡೆತ ತಿಂದಿದೆ. ರೈತರು ಸರಿಯಾದ ಸಮಯಕ್ಕೆ ಮಾರುಕಟ್ಟೆ ಸಿಗದೆ, ಸೂಕ್ತ ಸಲಹೆ-ಸೂಚನೆ ಇಲ್ಲದೆ ಹಾಗೂ ಕೃಷಿ ಪರಿಕರ ಕೊರತೆಯನ್ನು ಎದುರಿಸುತ್ತಿದ್ದಾರೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಆಗ್ರಿ ವಾರ್ ರೂಂ ಎಂಬ ಪರಿಕಲ್ಪನೆಯೊಂದಿಗೆ ಮುಂದಡಿಯಿಟ್ಟಿದ್ದು ಇದರಿಂದ ರೈತರಿಗೆ ಸೂಕ್ತ ಸಲಹೆ ಮಾಹಿತಿ ಹಾಗೂ ಮಾರುಕಟ್ಟೆ ಕುರಿತಂತೆ ಮಾಹಿತಿಯನ್ನು ನೀಡಲಾಗುವುದು. ವಿಸ್ತರಣಾ ಘಟಕ, ನಾಗನಹಳ್ಳಿ, ಮೈಸೂರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಮೈಸೂರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು, ಆತ್ಮ ನಿರ್ವಹಣೆ ಸಂಸ್ಥೆ, ಮೈಸೂರು, ತೋಟಗಾರಿಕೆ ಕಾಲೇಜು, ಮೈಸೂರು ಮತ್ತು ಜೆಎಸ್ಎಸ್ ಕೆವಿಕೆ, ಸುತ್ತೂರು ರವರ ಸಹಯೋಗದೊಂದಿಗೆ ಈ ಅಗ್ರಿ ವಾರ್ ರೂಂ ಕೆಲಸ ನಿರ್ವಹಿಸುತ್ತಿದೆ.

ಸಲಹೆ ಸೇವೆ


ರೈತರು ಕೆವಿಕೆಯ ಅಗ್ರಿ ವಾರ್ ರೂಂಗೆ ಭೇಟಿ ನೀಡಿ ಸಲಹೆಯನ್ನು ಪಡೆದಿರುವ ಪಟ್ಟಿ


ಕ್ರಮಸಂಖ‍್ಯೆ ದಿನಾಂಕ ವರದಿ
1 24-30 ಮೇ 2020 images
2 01-03 ಜೂನ್ 2020 images
3 04-08 ಜೂನ್ 2020 images
4 09-13 ಜೂನ್ 2020 images
5 14-17 ಜೂನ್ 2020 images
6 18-24 ಜೂನ್ 2020 images
7 25-30 ಜೂನ್ 2020 images
8 01-05 ಜುಲೈ 2020 images
9 06-12 ಜುಲೈ 2020 images
10 03-19 ಜುಲೈ 2020 images
11 20-26 ಜುಲೈ 2020 images
12 27th ಜುಲೈ 2020 to 2nd ಆಗಸ್ಟ್ 2020 images

ಅಗ್ರಿ ವಾರ್ ರೂಂ ನಿಂದ ರೈತರಿಗೆ ನೀಡಲಾದ ವಿಡೀಯೋ ಸಮ್ಮೇಳದ ಪಟ್ಟಿ


ಆಗ್ರಿ ವಾರ್ ರೂಂ ವತಿಯಿಂದ ವಿಡೀಯೋ ಸಮ್ಮಳನವನ್ನು ರೈತರಿಗೆ ಹಮ್ಮಿಕೊಂಡಿದ್ದು ಈ ಸಮ್ಮೇಳನದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿಸ್ತರಣಾ ಘಟಕ, ನಾಗನಹಳ್ಳಿ, ಮೈಸೂರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಮೈಸೂರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು, ಆತ್ಮ ನಿರ್ವಹಣೆ ಸಂಸ್ಥೆ, ಮೈಸೂರು, ತೋಟಗಾರಿಕೆ ಕಾಲೇಜು, ಮೈಸೂರು ಮತ್ತು ಜೆಎಸ್ಎಸ್ ಕೆವಿಕೆ, ಸುತ್ತೂರು ಸಂಸ್ಥೆಗಳ ವಿಷಯತಜ್ಞರುಗಳು ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.

ಕ್ರಮ ಸಂಖ್ಯೆ ದಿನಾಂಕ ವಿಷಯ ಸಂಪನ್ಮೂಲ ವ್ಯಕ್ತಿ
1 10.06.2020 ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ಸಂರ್ಪಕ ಮತ್ತು ಪರ್ಯಾಯ ಅವಕಾಶಗಳು ಶ್ರೀ ಬಿ.ಎಸ್. ಹರೀಶ್, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಕಾಲೇಜು, ಮೈಸೂರು
2 15.06.2020 ಸಮಸ್ಯಾತ್ಮಕ ಮಣ್ಣುಗಳ ನಿರ್ವಹಣೆ Management of problematic soils ಶ್ರೀ ಜೆ.ಜಿ. ರಾಜಣ್ಣ, ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ), ಜೆಎಸ್ಎಸ್ ಕೆವಿಕೆ, ಸುತ್ತೂರು
3 19.06.2020 ಕೃಷಿ ಸಾಲ ನಿರ್ವಹಣೆ ಡಾ. ಕೆಶವಮೂರ್ತಿ, ನಿವೃತ್ತ ಬ್ಯಾಂಕ್ ಅಧಿಕಾರಿ
4 25.06.2020 ಮೆಕ್ಕೆ ಜೋಳದಲ್ಲಿ ಸೈನಿಕ ಹುಳು ನಿರ್ವಹಣೆ ಡಾ. ವಿಜಯಕುಮಾರ್, ಸಹ ಪ್ರಾಧ್ಯಾಪಕರು, ವಿಸಿಫಾರಂ, ಮಂಡ್ಯ
5 29.06.2020 ಸಸ್ಯಗಳಲ್ಲಿ ಹೊಸ ಶೀಲಿಂಧ್ರ ನಾಶಕ ರೋಗಗಳ ನಿರ್ವಹಣೆ ಶ್ರೀ ಬಿ.ಎಸ್. ಹರೀಶ್, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಕಾಲೇಜು, ಮೈಸೂರು
6 03.07.2020 2020ರ ಮುಂಗಾರು ಹಂಗಾಮಿಗಾಗಿ ಸುಸ್ಥಿರ ಭತ್ತದ ತಳಿಗಳು ಡಾ. ಎಂ.ಪಿ. ರಾಜಣ್ಣ, ಭತ್ತ ತಳಿ ಸಂಶೋಧಕರು, ವಿಸಿ ಫಾರಂ, ಮಂಡ್ಯ
7 07.07.2020 ಶುಂಠಿ ಬೆಳೆಯಲ್ಲಿ ರೋಗ ನಿರ್ವಹಣೆ ಡಾ. ವೆಂಕಟೇಶ್, ಡೀನ್, ಕೃಷಿ ಕಾಲೇಜು, ವಿ.ಸಿ.ಫಾರಂ, ಮಂಡ್ಯ
8 09.07.2020 ನಬಾರ್ಡ್ ಬ್ಯಾಂಕ್ ನಿಂದ ಸಿಗುವ ಸೌಲಭ್ಯಗಳು ಶ್ರೀ ಮಣಿಕಂಠನ್, ಜಿಲ್ಲಾ ಅಭಿವೃದ್ಧಿ ಮ್ಯಾನೇಜರ್, ಮೈಸೂರು

ನಿರ್ದೇಶಕರು, ಐಸಿಎಆರ್-ಅಟಾರಿ, ಬೆಂಗಳೂರು ರವರು ಅಯೋಜಿಸಿದ ವಿಡೀಯೋ ಸಮ್ಮೇಳನ


ನಿರ್ದೇಶಕರು, ಐಸಿಎಆರ್-ಅಟಾರಿ, ಬೆಂಗಳೂರು ರವರು ಅಯೋಜಿಸಿದ ವಿಡೀಯೋ ಸಮ್ಮೇಳನ ಕಾರ್ಯಕ್ರಮ ಪಟ್ಟಿ

ಕ್ರಮಸಂಖ್ಯೆ ದಿನಾಂಕ ವಿವರ
1 13 ಏಪ್ರಿಲ್ 2020 ಕೆವಿಕೆ ಮುಖ‍್ಯಸ್ಥರ ವಿಡೀಯೋ ಸಮ್ಮೇಳನ
2 08 ಮೇ 2020 ಕರ್ನಾಟಕ ಕೆವಿಕೆಯ ಮುಖ‍್ಯಸ್ಥರ ವಿಡೀಯೋ ಸಮ್ಮೇಳನ
3 27-28 ಮೇ 2020 ವಾರ್ಷಿಕ ವರದಿ ಸಮೀಕ್ಷೆ ಮತ್ತು ಕ್ರಿಯಾ ಯೋಜನೆ 2020ರ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಗೆ ಬರುವ ಕೆವಿಕೆಗಳಿಗೆ
4 01 ಜೂನ್ 2020 ವಾರ್ಷಿಕ ವರದಿ ಸಮೀಕ್ಷೆ ಮತ್ತು ಕ್ರಿಯಾ ಯೋಜನೆ 2020ರ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯ, ರಾಯಚೂರು ವ್ಯಾಪ್ತಿಗೆ ಬರುವ ಕೆವಿಕೆಗಳಿಗೆ
5 03 ಜೂನ್ 2020 ವಾರ್ಷಿಕ ವರದಿ ಸಮೀಕ್ಷೆ ಮತ್ತು ಕ್ರಿಯಾ ಯೋಜನೆ 2020ರ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗ ವ್ಯಾಪ್ತಿಗೆ ಬರುವ ಕೆವಿಕೆಗಳಿಗೆ
6 13 ಜೂನ್ 2020 ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ಇವರೊಂದಿಗೆ ಕೆವಿಕೆಗಳ ಸಿಬ್ಬಂದಿವರ್ಗದವರೊಂದಿಗೆ ಸಂವಾದ
7 25-26 ಜೂನ್ 2020 ನೂರ್ಟ್ರಿ ಗಾರ್ಡನ್ ವಾರ್ಷಿಕ ವರದಿ ವಿಮರ್ಷೆ ಹಾಗೂ ಕ್ರಿಯಾ ಯೋಜನೆ
8 14-15 ಜುಲೈ 2020 ಕೆವಿಕೆಗಳ ವಲಯ ಕಾರ್ಯಾಗಾರ

ರೈತರಿಗೆ ಸಲಹೆಗಳು


ರೈತರ ಸಮುದಾಯಕ್ಕೆ ನೀಡಿದ ತಾಂತ್ರಿಕ ಸಲಹೆಗಳು

ಕ್ರಮ ಸಂಖ್ಯೆ ತಿಂಗಳು ಕೆಳಗಿಳಿಸಿಕೊಳ್ಳಬಹುದು
1 ಏಪ್ರಿಲ್ 2020 images
2 ಮೇ 2020 images
3 ಜೂನ್ 2020 images
4 ಜುಲೈ 2020 images

ಚಿತ್ರ ಸಂಪುಟ


ಏಪ್ರಿಲ್ 2020ರ ತಾಂತ್ರಿಕ ಸಲಹೆ

ಏಪ್ರಿಲ್ 2020ರ ಮಾಹೆಯಲ್ಲಿ ಕೋವಿಡ್ 19ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಫೋನ್ ಮುಖಾಂತ್ರ ಹಾಗೂ ಕೆವಿಕೆಗೆ ಬರುವ ರೈತರಿಗೆ ಸಲಹೆಯನ್ನು ನೀಡಲಾಯಿತು. ಇದರ ಜೊತೆಗೆ ನರ್ಸರಿ, ಜೈವಿಕ ಉತ್ಪನ್ನಗಳು ಹಾಗೂ ಔಷಧಿಗಳನ್ನು ಬೇಡಿಕೆಅನುಸಾರವಾಗಿ ಒದಗಿಸಲಾಯಿತು.


ಮೇ 2020ರ ತಾಂತ್ರಿಕ ಸಲಹೆ

ಮೇ 2020ರ ಮಾಹೆಯಲ್ಲಿ ಕೋವಿಡ್ 19ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಫೋನ್ ಮುಖಾಂತ್ರ ಹಾಗೂ ಕೆವಿಕೆಗೆ ಬರುವ ರೈತರಿಗೆ ಸಲಹೆಯನ್ನು ನೀಡಲಾಯಿತು. ಇದರ ಜೊತೆಗೆ ನರ್ಸರಿ, ಜೈವಿಕ ಉತ್ಪನ್ನಗಳು ಹಾಗೂ ಔಷಧಿಗಳನ್ನು ಬೇಡಿಕೆಅನುಸಾರವಾಗಿ ಒದಗಿಸಲಾಯಿತು.


ಪತ್ರಿಕಾ ವರದಿ

ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ವಿಜ್ಞಾನಿಗಳು ರೈತರ ತಾಕಿಗೆ ಭೇಟಿ ನೀಡಿ ಸಲಹೆ ನೀಡಿ ಮಾರುಕಟ್ಟೆ ಸಂಪರ್ಕವನ್ನು ಮಾಡಿಕೊಡಲಾಯಿತು.


ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ರವರೊಂದಿಗೆ ವಿಡಿಯೋ ಸಂವಾದ

ಶ್ರೀ ಬಿ.ಸಿ. ಪಾಟೀಲ್, ಮಾನ್ಯ ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ರವರೊಂದಿಗೆ ಐಸಿಎಆರ್-ಅಟಾರಿ, ಬೆಂಗಳೂರು ರವರು ಕರ್ನಾಟಕದ ಎಲ್ಲಾ ಕೆವಿಕೆಯೊಂದಿಗೆ ವಿಡಿಯೋ ಸಂವಾದವನ್ನು ಏರ್ಪಡಿಸಿದ್ದರು. ಸಂವಾದಲ್ಲಿ ನಮ್ಮ ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಭಾಗವಹಿಸಿದ್ದರು.


ಸೈನಿಟೈಸರ್ ತಯಾರಿಕೆ

ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಕೆವಿಕೆಯ ವತಿಯಿಂದ ಶ್ರೀಮತಿ ನೇತ್ರಾವತಿ ಎತ್ತಿನಮನಿ, ವಿಜ್ಞಾನಿ (ಗೃಹ ವಿಜ್ಞಾನ) ಹಾಗು ಶ್ರೀ ಜೆ.ಜಿ. ರಾಜಣ್ಣ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರವರು ಹಾಂಡ್ ಸಾನಿಟೈಸರ್ ಹಾಗೂ ಸ್ವಸಹಾಯ ಸಂಘದವರಿಂದ ಮಾಸ್ಕ್ ತಯಾರಿಸಿ ಸಿಬ್ಬಂದಿವರ್ಗದವರಿಗೆ, ಜೆಎಸ್ಎಸ್ ಅಂಗಸಂಸ್ಥೆಗಳಿಗೆ ಹಾಗೂ ರೈತರಿಗೆ ನೀಡಲಾಯಿತು.

ಕೋವಿಡ್ 19ರ ಕುರಿತ ಕಾರ್ಯಕ್ರಮಗಳು - ಜೆಎಸ್ಎಸ್ ಮಹಾವಿದ್ಯಾಪೀಠ, ಮೈಸೂರು ವತಿಯಿಂದ


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಜೆಎಸ್ಎಸ್ ಕೆವಿಕೆ, ಸುತ್ತೂರು, ಮೈಸೂರು ಜಿಲ್ಲೆ                     ಭೇಟಿ ನೀಡಿದವರ ಸಂಖ‍್ಯೆ :